ಈ ನೇಮಕಾತಿಗೆ ಓದಲೇಬೇಕಾದ ಪುಸ್ತಕ ??
https://amzn.to/2MkEOnK
ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ ??
https://www.instagram.com/ampuajobs/
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ??
https://rdpr.kar.nic.in/#horizontalTab2
https://rdpr.kar.nic.in/document/RDP_13_NREGGA_21_01_2020.pdf
The Rural Development and Panchayati Raj Department has issued a notification inviting applications from qualified candidates for vacancies in all 12 districts of the state under the Mahatma Gandhi National Rural Employment Guarantee Scheme. Interested candidates can submit their applications by post and the last date for submitting applications is 10th February 2020. I will briefly describe the qualifications, vacancies, vacancies available for this appointment, address of resignation etc. If you haven't yet subscribed to our channel, just click on the hourly image and click on this video to see if you like this video as well as you like it. We have e Nu inspired by the flowers do more vidiyogalna
Like Mod. . . ????
These posts are available in Uttarakannad, Raichur, Yadagiri, Kalaburagi, Chikkaballapur, Tumkur, Haveri, Gadag, Bagalkot, Bellary and Bangalore Urban and Rural districts.
Interested candidates should download the application form from the website of the Department of Rural Development and Panchayat Raj and submit the application form by post by February 10, 2020.
Address of application is: Commissioner, Rural Development Commission, Karnataka Department of Rural Development and Panchayat Raj, Multi-storey Building, 3rd Floor, 2nd Floor, Ambedkar Street Bangalore-560001.
For more information contact the helpline number 080-22342163
For more information contact the website address
www.rdpr.kar.nic.in
Candidates selected in this appointment will be required to undertake tours in the respective districts for inspection, field visit and field observation work. This appointment is made for a period of 2 years. Maximum wage of Rs 20,000.
Candidates applying for this appointment can see that they have at least 10 or more years of experience in the public administration, law, academia, social service or management field. Candidates cannot be members of any political party or banned organization.
ನಮಸ್ಕಾರ ವೀಕ್ಷಕರೇ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಂಚೆಯ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10 2020. ಈ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ಹುದ್ದೆಗಳ ಜಿಲ್ಲಾವಾರು ಲಭ್ಯತೆ, ಅರ್ಜಿ ಸಲ್ಲಿಸುವ ವಿಳಾಸ ಇನ್ನಿತರ ಮಾಹಿತಿಗಳನ್ನು ನಾನು ಸಂಕ್ಷಿಪ್ತವಾಗಿ ವಿವರಿಸ್ತಾ ಹೋಗ್ತೀನಿ. ವೀಕ್ಷಕರೇ ವಿಡಿಯೋ ಶುರು ಮಾಡೋಕೆ ಮೊದಲು ನಿಮ್ಮಲ್ಲಿ ಇನ್ನೊಂದು ರಿಕ್ವೆಸ್ಟ್ ಏನಂದ್ರೆ ನೀವಿನ್ನೂ ನಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಆಗದಿದ್ದರೆ ಈಗಲೇ ಸಬ್ಸ್ಕ್ರೈಬ್ ಆಗಿ ಹಾಗೇನೆ ಪಕ್ಕದಲ್ಲಿರೋ ಗಂಟೆ ಚಿತ್ರದ ಮೇಲೂ ಸಹ ಕ್ಲಿಕ್ ಮಾಡಿ ಮತ್ತು ನಮ್ಮ ಈ ವಿಡಿಯೋ ನಿಮಗೆ ಇಷ್ಟ ಆದ್ರೆ ದಯವಿಟ್ಟು ಲೈಕ್ ಮಾಡಿ ಇಷ್ಟ ಆಗ್ಲಿಲ್ಲಾಂದ್ರೆ ಅಟ್ಲೀಸ್ಟ್ ಡಿಸ್ ಲೈಕ್ ಆದ್ರೂ ಮಾಡಿ ಯಾವುದಾದರೂ ಒಂದು ಪ್ರತಿಕ್ರಿಯೆಯನ್ನ ದಯವಿಟ್ಟು ತೋರಿಸಿ ನೀವು ಲೈಕ್ ಮಾಡಿದರೆ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳ್ನಾ ಮಾಡೋಕೆ ಸ್ಪೂರ್ತಿ ಸಿಗುತ್ತೆ
ಲೈಕ್ ಮಾಡ್ತೀರಲ್ಲ. . .????
ಹಾಗಾದ್ರೆ ಬನ್ನಿ ಯಾವ್ಯಾವ ಜಿಲ್ಲೆಗಳಲ್ಲಿ ಈ ಹುದ್ದೆಗಳು ಲಭ್ಯವಿವೆ ಅನ್ನೋದನ್ನ ನೋಡುವುದಾದರೆ ಮೊದಲಿಗೆ ಉತ್ತರಕನ್ನಡ, ರಾಯಚೂರು, ಯಾದಗಿರಿ, ಕಲಬುರಗಿ, ಚಿಕ್ಕಬಳ್ಳಾಪುರ, ತುಮಕೂರು, ಹಾವೇರಿ, ಗದಗ, ಬಾಗಲಕೋಟೆ, ಬಳ್ಳಾರಿ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು ಇವುಗಳಿಗೆ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳ ಜೊತೆಗೆ ಫೆಬ್ರವರಿ 10 2020ರ ಒಳಗಾಗಿ ಅಂಚೆಯ ಮೂಲಕ ಕಳುಹಿಸಿಕೊಡಬೇಕು.
ಅರ್ಜಿ ಕಳುಹಿಸುವ ವಿಳಾಸ ಹೀಗಿದೆ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿ ಕಟ್ಟಡ, 3ನೇ ಹಂತ, ಎರಡನೇ ಮಹಡಿ, ಅಂಬೇಡ್ಕರ್ ವೀದಿ ಬೆಂಗಳೂರು-560001.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆ 080-22342163
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವೆಬ್ಸೈಟ್ ವಿಳಾಸ
www.rdpr.kar.nic.in
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಕಾಮಗಾರಿಯ ತಪಾಸಣೆ, ಕ್ಷೇತ್ರಭೇಟಿ, ಕ್ಷೇತ್ರಗಳ ವೀಕ್ಷಣೆ ಕೆಲಸಗಳಿಗೆ ಆಯಾ ಜಿಲ್ಲೆಗಳಲ್ಲಿ ಪ್ರವಾಸಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿರುತ್ತದೆ. 2 ವರ್ಷಗಳ ಅವಧಿಗೆ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಗರಿಷ್ಟ ವೇತನ 20,000 ರೂಪಾಯಿಯನ್ನು ನೀಡಲಾಗುತ್ತದೆ.
ಇನ್ನು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು ಏನು ಎನ್ನುವುದನ್ನು ನೋಡುವುದಾದರೆ ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ, ಸಮಾಜಸೇವೆ ಅಥವಾ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕನಿಷ್ಠ 10 ಅಥವಾ ಅದಕ್ಕಿಂತ ಹೆಚ್ಚು ಸೇವೆಸಲ್ಲಿಸಿದ ಅನುಭವ ಇರುವವರು ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷ ಅಥವಾ ನಿಷೇಧಿತ ಸಂಘಟನೆಯ ಸದಸ್ಯರಾಗಿರಬಾರದು.